ಉದ್ಯೋಗಾಕಾಂಕ್ಷಿಗಳೇ ಗಮನಿಸಿ : KSRTCಯ 3745 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾ.30ಕ್ಕೆ ವಿಸ್ತರಣೆ

NewsPoint

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 3745 ಚಾಲಕ ಮತ್ತು ನಿರ್ವಾಹ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಇಂತಹ ಹುದ್ದೆಗಳಿಗೆ ಇಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು. ಈ ದಿನಾಂಕವನ್ನು ಇದೀಗ 30-03-2020ಕ್ಕೆ ವಿಸ್ತರಣೆ ಮಾಡಲಾಗಿದೆ.


ಇತ್ತೀಚೆಗೆ ಕೆ ಎಸ್ ಆರ್ ಟಿ ಸಿ ಯಿಂದ 3745 ಚಾಲಕ ಮತ್ತು ನಿರ್ವಾಹಕರ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈಗಾಗಲೇ ಆರಂಭ ಕೂಡ ಆಗಿತ್ತು. ಇಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನಾಂಕ ಎಂದು ನಿಗಧಿ ಪಡಿಸಿತ್ತು. ಆದ್ರೇ ಅರ್ಜಿ ಸಲ್ಲಿಸಲು ನಿಗಧಿ ಪಡಿಸಿದ್ದಂತ ಇಂದಿನ ಕೊನೆಯ ದಿನಾಂಕವನ್ನು 30-3-2020ರ ವರೆಗೆ ವಿಸ್ತರಣೆ ಮಾಡಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೇಮಕಾತಿ ವಿಭಾಗ,, ಕೋವಿಡ್-19 ವೈರಾಣು ಹರಡುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರ ಹಿತ ದೃಷ್ಠಿಯಿಂದ ಚಾಲಕ ಮತ್ತು ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ದಿನಾಂಕ 20-03-2020ರಂದು ಅರ್ಜಿ ಸಲ್ಲಿಸಲು ನಿಗಧಿ ಪಡಿಸಿದ್ದಂತ ಕೊನೆಯ ದಿನಾಂಕವನ್ನು ದಿನಾಂಕ 30-03-2020ಕ್ಕೆ ವಿಸ್ತರಣೆ ಮಾಡಲಾಗಿದೆ. ಅರ್ಜಿ ಶುಲ್ಕ ಪಾವತಿಸಲು ದಿನಾಂಕ 02-04-2020 ಕೊನೆಯ ದಿನವಾಗಿರುತ್ತದೆ ಎಂಬುದಾಗಿ ತಿಳಿಸಿದೆ.
ಹೀಗಾಗಿ ಕೆ ಎಸ್ ಆರ್ ಟಿ ಸಿಯ ಚಾಲಕ, ನಿರ್ವಾಹಕರ 3745 ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸಿದ್ದ ಅಭ್ಯರ್ಥಿಗಳು ತಪ್ಪದೇ www.ksrtcjobs.karnataka.gov.in ಜಾಲತಾಣಕ್ಕೆ ಭೇಟಿ ನೀಡಿ ಸಲ್ಲಿಸೋದು ಮರೆಯ ಬೇಡಿ. ಆಲ್ ದಿ ಬೆಸ್ಟ್.

Post a Comment

0 Comments