ಕೊರೊನಾ ವೈರಸ್‌ ಇದ್ದ ಮಗನನ್ನು ಬಚ್ಚಿಟ್ಟ ಬೆಂಗಳೂರಿನ ರೈಲ್ವೇ ಅಧಿಕಾರಿ ಅಮಾನತು

ಮಾರ್ಚ್‌ 13 ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಪೇನ್‌ನಿಂದ ಬಂದಿದ್ದ ಈತನಿಗೆ ಮನೆಯಲ್ಲೇ ಪ್ರತ್ಯೇಕವಾಗಿರುವಂತೆ ಸೂಚಿಸಲಾಗಿತ್ತು. ಆದರೆ ಆತ ಹಾಗೆ ಮಾಡಿರಲಿಲ್ಲ. ಐದು ದಿನಗಳ ನಂತರ ಆತನಿಗೆ ಕೋವಿಡ್‌19 ಸೋಂಕು ಇರುವುದು ದೃಢಪಟ್ಟಿತ್ತು.ಬೆಂಗಳೂರು: ವಿದೇಶದಿಂದ ಮರಳಿದ್ದ ಮಗನನ್ನು ಬಚ್ಚಿಟ್ಟ ಬೆಂಗಳೂರಿನ ರೈಲ್ವೇ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ರೈಲ್ವೇ ಇಲಾಖೆ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಅಧಿಕಾರಿಯ ಮಗನನ್ನು ಪರೀಕ್ಷೆ ಮಾಡಿದಾಗ ಕೊರೊನಾ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಸ್ಪೇನ್‌ನಿಂದ ಮರಳಿದ್ದ ತನ್ನ 25 ವರ್ಷದ ಮಗನ ಪ್ರಯಾಣದ ವಿವರಗಳನ್ನು ಅಧಿಕಾರಿಯು ಮುಚ್ಚಿಟ್ಟದ್ದರು ಎಂದು ತಿಳಿದು ಬಂದಿದೆ.
ಅಸಿಸ್ಟೆಂಟ್ ಪರ್ಸನಲ್‌ ಆಫೀಸರ್‌ ಆಗಿರುವ ಮಹಿಳೆಯು ತನ್ನ ಮಗನನ್ನು ಬೆಂಗಳೂರು ರೈಲ್ವೇ ನಿಲ್ದಾಣದ ಸಮೀಪದಲ್ಲಿರುವ ರೈಲ್ವೇ ಕಾಲನಿಯ ಗೆಸ್ಟ್‌ ಹೌಸ್‌ನಲ್ಲಿ ಇಟ್ಟಿದ್ದರು ಎಂಬುದಾಗಿ ನೈಋತ್ಯ ರೈಲ್ವೇ ಹೇಳಿದೆ.

ರೈಲ್ವೇಯ ಅತಿಥಿ ಗೃಹದಲ್ಲಿ ಆತನ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡುವ ಮೂಲಕ ಇತರರ ಜೀವನವನ್ನು ಆಕೆ ಅಪಾಯಕ್ಕೆ ಒಡ್ಡಿದ್ದರು ಎಂಬುದಾಗಿ ರೈಲ್ವೇ ವಕ್ತಾರ ಇ ವಿಜಯ ಪಿಟಿಐಗೆ ತಿಳಿಸಿದ್ದಾರೆ. "ಆಕೆ ತನ್ನ ಕುಟುಂಬನ್ನು ರಕ್ಷಿಸುವುದಕ್ಕೋಸ್ಕರ ತನ್ನ ಮಗನನ್ನು ಬಚ್ಚಿಟ್ಟಿದ್ದರು. ಈ ಮೂಲಕ ನಮ್ಮೆಲ್ಲರನ್ನು ಅಪಾಯಕ್ಕೆ ದೂಡಿದ್ದರು," ಎಂಬುದಾಗಿ ನೈರುತ್ಯ ರೈಲ್ವೇ ಅಧಿಕಾರಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ದುಬೈನಿಂದ ಬಂದ ಕೊರೊನಾ ಪೀಡಿತನ ಸಂಪರ್ಕದಲ್ಲಿ 300 ಜನ: ಕೊಡಗು ತಲ್ಲಣ!

ಮಾರ್ಚ್‌ 13 ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಈತನಿಗೆ ಮನೆಯಲ್ಲೇ ಪ್ರತ್ಯೇಕವಾಗಿರುವಂತೆ ಸೂಚಿಸಲಾಗಿತ್ತು. ಆದರೆ ಆತ ಹಾಗೆ ಮಾಡಿರಲಿಲ್ಲ. ಐದು ದಿನಗಳ ನಂತರ ಆತನಿಗೆ ಕೋವಿಡ್‌19 ಸೋಂಕು ಇರುವುದು ದೃಢಪಟ್ಟಿತ್ತು.

ಇದೀಗ ಆತನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಮನೆಯಲ್ಲೇ ಪ್ರತ್ಯೇಕವಾಗಿರುವಂತೆ ಸೂಚಿಸಲಾಗಿದೆ. ಆತನ ಮತ್ತು ಆತನ ತಾಯಿಯ ಬೇಜವಾಬ್ದಾರಿ ನಡವಳಿಕೆಯಿಂದ ಇದೀಗ ಉಳಿದವರು ಸುಖಾ ಸುಮ್ಮನೆ ಪ್ರತ್ಯೇಕವಾಗಿ ಇರಬೇಕಾಗಿ ಬಂದಿದೆ.

ದುಬೈನಿಂದ ಬಂದು ಕೊರೊನಾ ಸೋಂಕಿತ ಕೊಡಗಿನ ವ್ಯಕ್ತಿಯ ಕಥೆಯೂ ಇದೇ ಆಗಿದೆ. ಆತ ಕೊರೊನಾ ಸೋಂಕು ಪೀಡಿತ ದೇಶದಿಂದ ಬಂದಿದ್ದರೂ ಆತನಿಗೆ ಯಾವುದೇ ಕಟ್ಟು ನಿಟ್ಟಿನ ಸೂಚನೆಗಳನ್ನು ನೀಡಿರಲಿಲ್ಲವೇ? ಆತ ಅದ್ಯಾಕೆ ಎಲ್ಲೆಂದರಲ್ಲಿ ಸುತ್ತಾಡಿದ್ದ ಎಂಬ ಪ್ರಶ್ನೆ ಉದ್ಭವಿಸಿದೆ.

ಕರ್ನಾಟಕದಲ್ಲಿ ಈಗಾಗಲೇ 15 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈಗಾಗಲೇ ಒಬ್ಬರು ಕೊರೊನಾದಿಂದ ಸಾವಿಗೀಡಾಗಿದ್ದಾರೆ. ನೂರಾರು ಜನರ ಮೇಲೆ ನಿಗಾ ಇಡಲಾಗಿದೆ. ದೇಶದಾದ್ಯಂತ 200ಕ್ಕೂ ಹೆಚ್ಚು ಜನರಿಗೆ ಕೊರೊನಾ ಇರುವುದು ದೃಢ ಪಟ್ಟಿದೆ. ಪರಿಸ್ಥಿತಿ ಹೀಗೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಇಂಥಹ ಹೊತ್ತಲ್ಲಿ ‘ನಾಗರಿಕರು, ಸುಶಿಕ್ಷಿತರು’ ಎಂದುಕೊಂಡವರೇ ಹೀಗೆ ಬೇಕಾಬಿಟ್ಟಿ ನಡೆದುಕೊಂಡರೆ ಹೇಗೆ?
 
ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ಸಿಟಿಜನ್‌ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ

Post a Comment

0 Comments