Online Safety: ಮಾಲ್‌ಗಳಲ್ಲಿ ಮೊಬೈಲ್‌ ನಂಬರ್‌ ಕೊಡಬೇಕಿಲ್ಲ!


ದೇಶದಲ್ಲಿ ದಿನವೂ ವಿವಿಧ ರೀತಿಯ ಸೈಬರ್ ವಂಚನೆ ಪ್ರಕರಣಗಳು ವರದಿಯಾಗುತ್ತಿವೆ. ಹೀಗಿರುವಾಗ ಜನರು ಅವುಗಳ ಬಗ್ಗೆ ಅರಿತುಕೊಂಡರೆ ಹೆಚ್ಚು ಅನುಕೂಲವಾಗುವ ಜತೆಗೆ, ವಂಚನೆಯಿಂದ ಸುಲಭದಲ್ಲಿ ಪಾರಾಗಬಹುದು. ಮಾಲ್‌, ಮಳಿಗೆಗಳಲ್ಲಿ ಮೊಬೈಲ್‌ ನಂಬರ್‌ ಕೊಡುವುದು ಕಡ್ಡಾಯವಲ್ಲ. ಕೊಡಲು ನಿರಾಕರಿಸಬಹುದು ಎಂದು ಎಡಿಜಿಪಿ ಬಿ. ದಯಾನಂದ್‌ ಸ್ಪಷ್ಟವಾಗಿ ಹೇಳಿದ್ದಾರೆ. ಪೆಟ್ರೋಲ್‌ ಬಂಕ್‌, ಹೋಟೆಲ್‌ ಸೇರಿದಂತೆ ಎಲ್ಲೇ ಹೋದಾಗ ನಮ್ಮ ಕಾರ್ಡ್‌ಗಳನ್ನು ಅಲ್ಲಿನ ಸಿಬ್ಬಂದಿ ನಮ್ಮ ಕಣ್ಣೆದುರೇ ಸ್ವೈಪ್‌ ಮಾಡಿ ಪೇಮೆಂಟ್‌ ಮಾಡಿಸಬೇಕು, ಒಳಗೆ ಒಯ್ದರೆ ಪ್ರಶ್ನಿಸಬಹುದು ಎಂದು ಸೈಬರ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಾಲ್‌ಗಳಲ್ಲಿ ಆಫರ್‌, ಕ್ಯಾಶ್‌ಬ್ಯಾಕ್, ಡಿಸ್ಕೌಂಟ್ ಕೊಡುಗೆ ಎಂದು ನಂಬರ್ ಪಡೆಯಲಾಗುತ್ತದೆ. ಆದರೆ ನಂತರ ಅದು ದುರ್ಬಳಕೆಯಾಗುವ ಸಾಧ್ಯತೆಯಿರುತ್ತದೆ.

ಟ್ರೂ ಕಾಲರ್‌ ಕೂಡ ಸೇಫ್‌ ಅಲ್ಲ


ಹೆಚ್ಚಿನವರು ಅಂದುಕೊಂಡಂತೆ ಟ್ರೂ ಕಾಲರ್‌ ಸೇಫ್‌ ಅಲ್ಲ. ಅದು ನಿಮಗೆ ಮಾಹಿತಿ ನೀಡುವ ಮೊದಲು ನಿಮ್ಮೆಲ್ಲಾ ವೈಯಕ್ತಿಕ ವಿವರಗಳನ್ನು ಪಡೆದುಕೊಳ್ಳುತ್ತದೆ. ಹಾಗಾಗಿ ಅದು ಸೋರಿಕೆಯಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ತೀರಾ ಅಗತ್ಯವಿಲ್ಲದಿದ್ದರೆ ಟ್ರೂ ಕಾಲರ್‌ ಹಾಕಿಕೊಳ್ಳದಿರುವುದೇ ಒಳ್ಳೆಯದು.

View image on Twitter

ಉಚಿತ ಫೈ ಡೇಂವೈ-ಜರಸ್‌


ಬಸ್‌ ನಿಲ್ದಾಣ, ರೈಲು ನಿಲ್ದಾಣ, ಮಾಲ್‌ ಮತ್ತಿತರ ಕಡೆ ಉಚಿತ ವೈ-ಫೈ ಸಂಪರ್ಕ ಸಿಕ್ಕಿದೆ ಎಂದು ಬಳಸುವ ಮುನ್ನ ಗ್ರಾಹಕರು ಎಚ್ಚರ ವಹಿಸಿದರೆ ಒಳಿತು. ಏಕೆಂದರೆ ಹಾಗೆ ಮುಕ್ತವಾಗಿ ಸಿಗುವ ಆ ವೈ-ಫೈ ನಿಂದ ನಿಮ್ಮ ಮೊಬೈಲ್‌ ನಲ್ಲಿನ ವೈಯಕ್ತಿಕ ವಿವರಗಳು ಸೋರಿಕೆಯಾಗುವ ಸಾಧ್ಯತೆ ತುಂಬಾ ಹೆಚ್ಚಿರುತ್ತವೆ. ಜೊತೆಗೆ ನೀವು ಅ ಸಂಪರ್ಕ ಬಳಸಿ ಬ್ಯಾಂಕ್‌ ವಹಿವಾಟು ನಡೆಸುವುದು ಅಪಾಯಕಾರಿ.


ಆಧಾರ್‌ ನೀಡುವ ಮುನ್ನ ಎಚ್ಚರ


ಯಾವುದೇ ಉದ್ದೇಶಕ್ಕೆ ಆಧಾರ್‌ ನೀಡುವ ಮುನ್ನ ಕೂಡ ಗ್ರಾಹಕರು ಎಚ್ಚರವಹಿಸಬೇಕು. ಗ್ರಾಹಕರು ಆಧಾರ್‌ ನಕಲು ಪ್ರತಿ ನೀಡುವ ಮುನ್ನ ಅದರ ಮೇಲೆ ಯಾವ ಉದ್ದೇಶಕ್ಕೆ ನೀಡಲಾಗಿದೆ ಎಂದು ಬರೆದಿದ್ದರೆ ಅದು ದುರುಪಯೋಗವಾಗುವ ಸಾಧ್ಯತೆಗಳು ಕಡಿಮೆ ಇರುತ್ತವೆ.

ಐಡಿ ಕಾರ್ಡ್‌ಗಳ ದುರುಪಯೋಗ


ಟೆಲಿಕಾಂ ಕಂಪನಿಗಳು ಒಬ್ಬ ವ್ಯಕ್ತಿಯ ಗುರುತಿನ ಚೀಟಿಯ ಮೇಲೆ ಇಂತಿಷ್ಟು ಸಿಮ್‌ ಕಾರ್ಡ್‌ ಮಾತ್ರ ಪಡೆಯಬೇಕು ಎಂಬ ಷರತ್ತು ವಿಧಿಸಿವೆ. ಆದರೆ, ಏಜೆಂಟರು, ಮಧ್ಯವರ್ತಿಗಳು, ಖಾಸಗಿ ವ್ಯಕ್ತಿಗಳು ಮತ್ತು ಕೆಲವು ಅಮಾಯಕರು ಕೂಡ ಹಣದ ಆಸೆಗೆ ಬಿದ್ದು ಸಿಮ್‌ ಖರೀದಿಸಿ ಆ್ಯಕ್ಟಿವೇಟ್‌ ಮಾಡಿ ಖದೀಮರ ಕೈಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೊಡುತ್ತಾರೆ. ಅಂತಹ ಸಿಮ್‌ಗಳನ್ನೇ ಖದೀಮರು ಬಹುತೇಕ ಬಳಕೆ ಮಾಡುತ್ತಾರೆ. ಆಧಾರ್‌ ಆಧಾರಿತ ಬೆರಳಚ್ಚು ತೆಗೆದುಕೊಳ್ಳುವ ಮೂಲಕ ಸಿಮ್‌ ವಿತರಣೆ ವ್ಯವಸ್ಥೆ ಉತ್ತಮವಾಗಿತ್ತು. ಈಗ ಯಾರು ಎಷ್ಟು ಬೇಕಾದರೂ ಸಿಮ್‌ ಪಡೆಯಬಹುದು.

Post a Comment

0 Comments