Cyber Crime: ವಂಚನೆಗೊಳಗಾದರೆ ದೂರು ದಾಖಲಿಸುವುದು ಹೇಗೆ?


ಸೈಬರ್‌ ಕ್ರೈಂ ಎನ್ನುವುದು ಇಂದು ನಾನಾ ಸ್ವರೂಪದಲ್ಲಿ ನಡೆಯುತ್ತದೆ. ದೇಶದಲ್ಲಿ ಆನ್‌ಲೈನ್ ಸೇವೆಗಳು ಮತ್ತು ಆ್ಯಪ್‌ ಆಧಾರಿತ ಸೇವೆ, ಇ ಕಾಮರ್ಸ್ ಮತ್ತು ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಹಲವು ವಿಧದ ವಂಚನೆಗಳು ನಡೆಯುತ್ತವೆ. ಆನ್‌ಲೈನ್ ಕ್ಯಾಬ್ ಬುಕಿಂಗ್, ಬ್ಯಾಂಕಿಂಗ್, ಸರಕು ಖರೀದಿ, ಯುಪಿಐ ಪಾವತಿ ಹೀಗೆ ಹಲವು ಸ್ವರೂಪದ ವಂಚನೆ ನಡೆದಾಗ ದೂರು ನೀಡುವುದು ಅಗತ್ಯ. ಆದರೆ ಅರಿವಿನ ಕೊರತೆ ಮತ್ತು ಕೆಲವೊಂದು ಪ್ರಕರಣಗಳಲ್ಲಿ ಮರ್ಯಾದೆಗೆ ಅಂಜಿ ಜನರು ದೂರು ದಾಖಲಿಸಲು ಹಿಂದೇಟು ಹಾಕುತ್ತಾರೆ. ಆದರೆ ಎಲ್ಲ ಸ್ವರೂಪದ ಸೈಬರ್ ಕ್ರೈಂ, ಆನ್‌ಲೈನ್ ವಂಚನೆ ಕುರಿತು ದೂರು ದಾಖಲಿಸಲು ಕೇಂದ್ರ ಸರಕಾರ ಹೊಸ ಪೋರ್ಟಲ್ ಒಂದನ್ನು ಆರಂಭಿಸಿದೆ. ಅದರಲ್ಲಿ ದೂರು ದಾಖಲಿಸಲು ಯಾವ ವಿಧಾನ ಅನುಸರಿಸಬೇಕು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.

​ಮೊದಲು ಪೋರ್ಟಲ್ ತೆರೆಯಿರಿ..


ಸೈಬರ್ ವಂಚನೆ ಕುರಿತಾದ ಯಾವುದೇ ಪ್ರಕರಣದಲ್ಲಿ ದೂರು ನೀಡಲು ಕೇಂದ್ರ ಸರಕಾರದ ಅಧಿಕೃತ https://cybercrime.gov.in/ ಪೋರ್ಟಲ್ ತೆರೆಯಿರಿ. ಅದರಲ್ಲಿ ಫೈಲ್ ಎ ಕಂಪ್ಲೇಂಟ್ ಆಯ್ಕೆ ಮಾಡಿ.

​ನಿಯಮಗಳನ್ನು ಓದಿಕೊಳ್ಳಿ..ಬಳಿಕ ಅಲ್ಲಿ ಕೊಟ್ಟಿರುವ ನಿಯಮಗಳನ್ನು ಓದಿಕೊಳ್ಳಿ. ಐ ಅಕ್ಸೆಪ್ಟ್ ಎಂದಿರುವಲ್ಲಿ ಕ್ಲಿಕ್ ಮಾಡಿ. ಮುಂದಿನ ಪೇಜ್‌ಗೆ ತೆರಳಿ.


ರಿಪೋರ್ಟ್ ಅದರ್ ಸೈಬರ್‌ಕ್ರೈಂ

ಮುಂದಿನ ಪೇಜ್‌ನಲ್ಲಿ ತೆರೆದುಕೊಳ್ಳುವ ರಿಪೋರ್ಟ್ ಅದರ್ ಸೈಬರ್‌ಕ್ರೈಂ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

​ಸಿಟಿಜನ್ ಲಾಗಿನ್ಸಿಟಿಜನ್ ಲಾಗಿನ್ ಎಂಬ ಕೆಟಗರಿ ಸೆಲೆಕ್ಟ್ ಮಾಡಿ, ಅದರಲ್ಲಿ ಕೇಳಿರುವ ವಿವರ ತುಂಬುತ್ತಾ ಬನ್ನಿ. ಓಟಿಪಿ ಎಂಟರ್ ಮಾಡಿದ ಬಳಿಕ ಕ್ಯಾಪ್ಚಾ ಸಂಖ್ಯೆಯನ್ನು ತುಂಬಿರಿ. ಅದಾದ ನಂತರ ಸಬ್‌ಮಿಟ್ ಕೊಡಿ. ಅದಾದ ನಂತರ ಮತ್ತೊಂದು ಹೊಸ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಇನ್ಸಿಡೆಂಟ್ ಡಿಟೇಲ್ಸ್, ಸಸ್ಪೆಕ್ಟ್ ಡಿಟೇಲ್ಸ್, ಕಂಪ್ಲೇಂಟ್ಸ್ ಡಿಟೇಲ್ಸ್ ಹಾಗೂ ಪ್ರಿವ್ಯೂ ಮತ್ತು ಸಬ್ಮಿಟ್ ಕೊಡಿ.

ಇನ್ಸಿಡೆಂಟ್ ಡಿಟೇಲ್ಸ್ ಪೇಜ್


ಇನ್ಸಿಡೆಂಟ್ ಡಿಟೇಲ್ಸ್ ಪೇಜ್‌ನಲ್ಲಿ ಕಂಪ್ಲೇಂಟ್ ಕೆಟಗರಿ, ಸಬ್ ಕೆಟಗರಿ, ಪ್ರಕರಣ ನಡೆದ ದಿನಾಂಕ, ಸಮಯ, ಸ್ಥಳ ಇತ್ಯಾದಿ ವಿವರ ಭರ್ತಿ ಮಾಡಿ.

​ಸೇವ್ ಆಂಡ್ ನೆಕ್ಟ್ಸ್


ಜತೆಗೆ ಯಾವ ವೆಬ್‌ಸೈಟ್‌ನಲ್ಲಿ ವಂಚನೆ ನಡೆಯಿತು, ಇಲ್ಲವೆ ಸಾಮಾಜಿಕ ತಾಣ ಖಾತೆಯ ವಿವರ, ಯುಆರ್‌ಎಲ್, ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯ, ಪೂರಕ ಮಾಹಿತಿಯನ್ನು ಎಂಟರ್ ಮಾಡಿ. ಎಲ್ಲ ವಿವರ ಭರ್ತಿ ಮಾಡಿದ ಬಳಿಕ ಸೇವ್ ಆಂಡ್ ನೆಕ್ಸ್ಟ್ ಕೊಡಿ.


Post a Comment

0 Comments