ಕರ್ನಾಟಕದ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ BIG GOOD NEWS FROM INDIAN POST FOR KARNATAKA JOB ASPIRANTS

Image result for post office recruitment 2019

Hello viewers The Indian Postal Department has already invited applications for more than 10,000 postal service posts across the country. The appointment is for the post of Branch Postmaster Assistant Branch Postmaster and Doc Sewak. The notification was issued in the first week of August. Out of a total of 10,000 posts, there are now 2637 vacancies in various postal circles in the state of Karnataka. Application Fee Candidates belonging to Scheduled Caste Scheduled Tribes who are subject to reservation including women candidates and disabled candidates are exempted from the application fee. Candidates with SSLC or equivalent qualification can apply and it is compulsory to study Mathematics and English as a subject in SSLC. Candidates must also have a prescribed qualification in the native language of their respective states. This means that candidates from the state of Karnataka must have a prescribed qualification in Kannada without any compulsion. Must have 60 days Computer Training Course Certificate Candidates applying should also know about cycling and two-wheeler driving. The minimum age limit is 18 years and maximum age limit is 40 years. Full information on age is available on the website and it is suggested to check the link in the description box. And as we mentioned at the beginning of this video, the big news is that the online application was online last September 4, but the postal department amended it and extended the date to September 11. This has extended the deadline for submission of 7 days for candidates, giving good news to Karnataka candidates. For more information contact the helpline number 080-22392554 For more information contact the website address www.appost.in/gdsonline all the best Thank you ನಮಸ್ಕಾರ ವೀಕ್ಷಕರೇ ಭಾರತೀಯ ಅಂಚೆ ಇಲಾಖೆಯು ದೇಶದಾದ್ಯಂತ 10,000ಕ್ಕೂ ಹೆಚ್ಚು ಅಂಚೆ ಸೇವಕ ಹುದ್ದೆಗಳ ನೇಮಕಕ್ಕೆ ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಿದ್ದು ಈ ನೇಮಕಾತಿಗೆ ಸಂಬಂಧಿಸಿದ ವಿದ್ಯಾರ್ಹತೆ ಅರ್ಜಿ ಶುಲ್ಕ ಇನ್ನಿತರ ಸಂಕ್ಷಿಪ್ತ ಮಾಹಿತಿಗಳನ್ನು ಇಲ್ಲಿ ವಿವರಿಸಲಾಗಿದೆ ಹಾಗೂ ಈ ನೇಮಕಾತಿಯ ಉದ್ಯೋಗಾಕಾಂಕ್ಷಿಗಳಿಗೆ ಅಂಚೆ ಇಲಾಖೆಯಿಂದ ಬಹುದೊಡ್ಡ ಸಿಹಿ ಸುದ್ದಿಯೊಂದು ಕಾದಿದೆ ಅದೇನು ಅಂತ ವಿಡಿಯೋದ ಕೊನೆಯಲ್ಲಿ ಹೇಳ್ತೀವಿ . ಈ ನೇಮಕಾತಿಯಲ್ಲಿ ಬ್ರಾಂಚ್ ಪೋಸ್ಟ್ ಮಾಸ್ಟರ್ ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಮತ್ತು ಡಾಕ್ ಸೇವಕ್ ಹುದ್ದೆಗಳಿಗೆ ನೇಮಕಾತಿಯ ನಡೆಯುತ್ತಿದ್ದು ಆಗಸ್ಟ್ ಮೊದಲನೆಯ ವಾರದಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿತ್ತು ಒಟ್ಟು 10,000 ಹುದ್ದೆಗಳ ಪೈಕಿ ಕರ್ನಾಟಕ ರಾಜ್ಯದ ವಿವಿಧ ಅಂಚೆ ವೃತ್ತಗಳಲ್ಲಿ ಖಾಲಿ ಇರುವ 2637 ಹುದ್ದೆಗಳ ನೇಮಕಾತಿಯು ಈಗ ನಡೆಯುತ್ತಿದೆ . ಅರ್ಜಿ ಶುಲ್ಕ ಸಾಮಾನ್ಯ, ಆರ್ಥಿಕವಾಗಿ ಹಿಂದುಳಿದ ವರ್ಗ, ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 100 ರೂಪಾಯಿಗಳನ್ನು ಮಹಿಳಾ ಅಭ್ಯರ್ಥಿಗಳು, ವಿಕಲಚೇತನ ಅಭ್ಯರ್ಥಿಗಳು ಸೇರಿದಂತೆ ಮೀಸಲಾತಿ ವ್ಯಾಪ್ತಿಗೆ ಒಳಪಡುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿಯನ್ನು ನೀಡಲಾಗಿದೆ. SSLC ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು SSLCಯಲ್ಲಿ ಗಣಿತ ಮತ್ತು ಇಂಗ್ಲಿಷ್ ಭಾಷೆಯನ್ನು ಒಂದು ವಿಷಯವನ್ನಾಗಿ ಅಧ್ಯಯನ ಮಾಡಿರುವುದು ಕಡ್ಡಾಯವಾಗಿದೆ . ಅಷ್ಟೇ ಅಲ್ಲದೆ ಅಭ್ಯರ್ಥಿಗಳು ಆಯಾ ರಾಜ್ಯಗಳ ಸ್ಥಳೀಯ ಭಾಷೆಯಲ್ಲಿಯೇ ನಿಗದಿತ ವಿದ್ಯಾರ್ಹತೆಯನ್ನು ಹೊಂದಿರಬೇಕು. ಅಂದರೆ ಕರ್ನಾಟಕ ರಾಜ್ಯದ ಅಭ್ಯರ್ಥಿಗಳು ಕಡ್ಡಾಯವಾಗಿ ಯಾವುದೇ ಮುಲಾಜಿಲ್ಲದೆ ಕನ್ನಡ ಭಾಷೆಯಲ್ಲಿಯೇ ನಿಗದಿತ ವಿದ್ಯಾರ್ಹತೆಯನ್ನು ಹೊಂದಿರಬೇಕು. ಇದರೊಂದಿಗೆ 60 ದಿನಗಳ ಕಂಪ್ಯೂಟರ್ ಟ್ರೈನಿಂಗ್ ಕೋರ್ಸ್ ಪ್ರಮಾಣಪತ್ರ ಹೊಂದಿರಬೇಕು. ಮತ್ತು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೈಕ್ಲಿಂಗ್ ಹಾಗೂ ದ್ವಿಚಕ್ರ ವಾಹನಗಳ ಚಾಲನೆಯನ್ನೂ ಕೂಡ ತಿಳಿದಿರಬೇಕು. ಈ ನೇಮಕಾತಿಯಲ್ಲಿ ಕನಿಷ್ಠ ವಯೋಮಿತಿಯನ್ನು 18 ವರ್ಷಗಳಿಗೆ ಹಾಗೂ ಗರಿಷ್ಠ ವಯೋಮಿತಿಯನ್ನು 40 ವರ್ಷಗಳಿಗೆ ನಿಗದಿಪಡಿಸಲಾಗಿದೆ. ವಯೋಮಿತಿ ಕುರಿತಾದ ಸಂಪೂರ್ಣ ಮಾಹಿತಿಯು ವೆಬ್ಸೈಟ್ನಲ್ಲಿ ಲಭ್ಯವಿದ್ದು ಅದನ್ನು ಡಿಸ್ಕ್ರಿಪ್ಷನ್ ಬಾಕ್ಸ್ ನಲ್ಲಿರುವ ಲಿಂಕಿನ ಮೂಲಕ ಪರಿಶೀಲಿಸಲು ಸೂಚಿಸಲಾಗಿದೆ . ಹಾಗೂ ಈ ವಿಡಿಯೋದ ಮೊದಲಿನಲ್ಲಿ ನಾವು ಹೇಳಿದಂತೆ ಬಹುದೊಡ್ಡ ಸಿಹಿ ಸುದ್ದಿ ಏನೆಂದರೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಈ ಮೊದಲು ಸೆಪ್ಟೆಂಬರ್ 4 ಕೊನೆಯ ದಿನವಾಗಿತ್ತು ಆದರೆ ಅಂಚೆ ಇಲಾಖೆಯು ಇದರಲ್ಲಿ ತಿದ್ದುಪಡಿ ಮಾಡಿ ಈ ದಿನಾಂಕವನ್ನು ಸೆಪ್ಟೆಂಬರ್ 11 ರವರೆಗೆ ವಿಸ್ತರಿಸಿ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಅಭ್ಯರ್ಥಿಗಳಿಗೆ 7 ದಿನಗಳ ಹೆಚ್ಚುವರಿ ಅರ್ಜಿ ಸಲ್ಲಿಕೆಯ ಕಾಲಾವಕಾಶವನ್ನು ವಿಸ್ತರಿಸಿ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಸಹಾಯವಾಣಿ ಸಂಖ್ಯೆ 080-22392554 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವೆಬ್ಸೈಟ್ ವಿಳಾಸ www.appost.in/gdsonline all the best ಧನ್ಯವಾದಗಳು

Post a Comment

0 Comments